Saturday 26 September 2020


 Is democracy in India? ಪ್ರಜಾ  ಪದ್ಧತಿ ಭಾರತದಲ್ಲಿ ಇದೆಯಾ ?

ಸ್ವಾರ್ಥ ಪದ್ಧತಿ ಮಾತ್ರ ಇದ್ದು ಪ್ರಜಾಪದ್ಧತಿ ಹೆಸರಿಗೆ ಮಾತ್ರ ಗೋಚರವಾಗುತಿದೆ. ಕಾರಣ ಪ್ರಜಾಪದ್ದತಿಯ ಕೇವಲ ಒಂದು ಶೇಕಡಾ ಅರಿವು ಕೂಡ ಇಲ್ಲದಿರುವುದು - ಅರಸು ಪದ್ದತಿಯನ್ನು ದಿಕ್ಕರಿಸಿರುವುದು - ಪರಿಣಾಮ ತ್ರಿಶಂಕು ಸ್ಥಿತಿ - ಮಾನವ ದೇಹದ ಎರಡು ಕೈಗಳು ಒಂದರ ವಿರುದ್ಧ  ಒಂದು  ಹೊರಡುವುದು  - ಪ್ರತಿಫಲ ಶೂನ್ಯದ ವ್ಯವಸ್ಥೆ - ಅಂದು ಬ್ರಿಟಿಶರು ಹೇಳಿದ ಮಾತು - ನೀವು ಆಡಳಿತ ನಡೆಸಲು ಅಸಮರ್ಥರು , ಅಳಿಸಿಕೊಳ್ಳಲು ಮಾತ್ರ ಯೋಗ್ಯರು - ಸೇವೆಗಾಗಿ ದುಡಿಯುವ ಬದಲು ಪಕ್ಷ ಪದವಿ ಸ್ಥಾನ ಮಾನ ಘನತೆ ಗೌರವ ಎಂಬ ಕಲ್ಪನೆಯ ಕಗ್ಗತಲೆಯ ಕೊನೆಯಲ್ಲಿ  ಬಂದಿಯಾಗಿರುವುದು. 

ಪ್ರಜಾ ಪದ್ದತಿಯ ಉಳಿವಿಗಾಗಿ - ನಮ್ಮೆಲ್ಲರ ಏಳಿಗಾಗಿ - ಪಾರ್ಲಿಮೆಂಟ್ ಸದಸ್ಯರೊಂದಿಗೆ - ಪ್ರಧಾನಿಗೆ ಪತ್ರ

ದೇಶದ ಕಾನೂನು ಮಾಡುವುದು ,  ಅನುಷ್ಠಾನ , ಪಾಲಿಸದವರಿಗೆ ಶಿಕ್ಸಿಸಿ ಸರಿದಾರಿಗೆ ತರುವುದು ನಾವೇ -  ಇದರ ಅರಿವು ನಮಗೆ ಇನ್ನು ಬಂದಿಲ್ಲ 

ವಿಷಯದ ಕುರಿತು ಭಿನ್ನತೆ ಮಾನವ ಸಹಜ ಗುಣ - ಅದಕ್ಕೆ ಬೀದಿಗಿಳಿದು ಹೋರಾಟ ಸಲ್ಲ - ನ್ಯಾಯಾಂಗ ವ್ಯವಸ್ಥೆ ಅದಕ್ಕಾಗಿ ಮೀಸಲು  ಬಳಸೋಣ 

ನ್ಯಾಯಾಂಗ ವಿಳಂಬ ನೀತಿ ನಾವು ಹುಟ್ಟು ಹಾಕ್ಕಿದ್ದು - ಇಚ್ಛಿಸಿದಲ್ಲಿ ಈ ಕ್ಷಣ ಮಾತ್ರದಲ್ಲಿ ಕಿತ್ತು ಹಾಕಿ - ಒಂದೇ ದಿನದಲ್ಲಿ ನ್ಯಾಯ ದಾನ ಸಾಧ್ಯತೆ 

ಶಿಕ್ಷೆ ರೋಗಕ್ಕೆ ಮದ್ದು - ಮಾಡದಿದ್ದಲ್ಲಿ ಸಾಂಕ್ರಾಮಿಕ ರೋಗವಾಗಿ ಸಮಾಜದ ಸರ್ವನಾಶ - ಇದು ಭಾರತದ ಸ್ಥಿತಿ 

ಹೊರ ದೇಶದಲ್ಲಿ ಅಧ್ಯಕ್ಷ ಪದವಿಯಲ್ಲಿರುವ ವ್ಯಕ್ತಿ ತನ್ನ ತಪ್ಪು ಒಪ್ಪಿಕೊಂಡ ಉದಾರಣೆ ಇದೆ. ಇಲ್ಲಿ ಯಾರು ಕೂಡ ಇಲ್ಲ. ಅದಕ್ಕೆ ಪೂರಕ ವಾತಾವರಣ ಬೇಕು 

ಒಂದು ತಪ್ಪಿಗೆ ಒಂದೇ ಶಿಕ್ಷೆ. ಇಲ್ಲಿ ಒಂದು ತಪ್ಪಿಗೆ ಎರಡು ರೀತಿಯ ಶಿಕ್ಷೆ ಇರುವುದು ತಪ್ಪು. ಅದಕ್ಕೆ ಸೂಕ್ತ ಬದಲಾವಣೆ ಅಗತ್ಯ 

ಮಾಧ್ಯಮ ಅಪರಾಧಿಗಳ ಹಿಂದೆ ಬಿದ್ದಿದೆ. ಅದು ಸನ್ಮಾರ್ಗಿಗಳ ಹಿಂದೆ ಧ್ವನಿಯಾಗಬೇಕು. 

ಕಾನೂನಿನ ಬಿಗಿ ಮುಷ್ಟಿಯಿಂದ ತಪ್ಪಿಸಲು ಅಸಾಧ್ಯ ಎಂದು ಅರಿತಾಗ - ನೂರಕ್ಕೆ ನೂರು  ಕಾನೂನು ಸ್ವಯಂ ಪ್ರೇರಿತ ಪಾಲನೆ 

ದೇಶದ ಕಾನೂನಿಗೆ ಎಳ್ಳಿನಷ್ಟೂ ಮಾನ್ಯತೆ ಕೊಡದಿರುವ ಇಂದಿನ ಅರಸರು - ಪ್ರಜಾಪ್ರತಿನಿಧಿ  - ಅವರುಗಳು ಅನ್ಯರಿಗೆ ಮಾದರಿ ಆಗಬೇಕು 

ಮತದಾನ ಮಾಡುವ ಹಕ್ಕಿಲ್ಲದ ವ್ಯಕ್ತಿ - ದೇಶದ ಪಾರ್ಲಿಮೆಂಟ್ ಪ್ರವೇಶಿಸಿ ಪ್ರಧಾನಿ ಆಗಲು ಸಾಧ್ಯ - ಇದು ದೇಶದಲ್ಲಿ  ಪ್ರಜಾಪದ್ಧತಿ ಸಮಾಧಿ 

ಕನಿಷ್ಠ ಅರ್ಹತೆ , ವಿದ್ಯೆ , ಅನುಭವ - ಇತ್ಯಾದಿಗಳು ದೇಶದಲ್ಲಿ  ದುಡಿಯುವ ಪ್ರತಿ ಸರಕಾರಿ ಖಾಸಗಿ ನೌಕರನಿಗೂ ಬೇಕು - ಆದರೆ ಅದು ಯಾವುದು ಕೂಡ ಇಲ್ಲದೆ ದೇಶದ ಪ್ರಧಾನಿಯಾಗಲು ಪ್ರಜಾಪದ್ಧತಿ ದೇಶಗಳಲ್ಲಿ ಭಾರತದಲ್ಲಿ ಮಾತ್ರ ಸಾಧ್ಯ. ಇದನ್ನು ಯಾರು ಮಾಡಬೇಕು - ರಾವಣ ರಾಜ್ಜ ಇನ್ನು ಬೇಕೇ ಸಾಕೆ 

ನ್ಯಾಯಾಂಗ, ಕಾರ್ಯಂಗ ಮತ್ತು ಪ್ರಧಾನಿ ಮಂತ್ರಿಗಳ ಕೈಕೆಳಗೆ ಕೆಲಸ  ಮಾಡುವವರು ವಿದ್ಯಾವಂತರು ಅನುಭವಿಗಳು - ಮಾಡಿಸುವವ ಶಾಸಕಾಂಗ ...?

ನಿಮ್ಮ ಭತ್ತೆ ಸಂಬಳ ಹೆಚ್ಚು ಮಾಡುವಲ್ಲಿ ಇರುವ ಒಗ್ಗಟ್ಟು  - ದೇಶದ ಅಭಿವೃದ್ಧಿ ಬಗ್ಗೆ ಇಲ್ಲದಿರುವುದು ಎಷ್ಟು ಸರಿ 

ಕೇವಲ ಪಾರ್ಲಿಮೆಂಟ್ ಸದಸ್ಯರುಗಳು ಪ್ರಾಮಾಣಿಕರಾದ ದಿನದಿಂದಲೇ ದೇಶದ ಮನೋವೇಗದ ಅಭಿವೃದ್ಧಿಗೆ  ಚಾಲನೆ 

ಒಂದು ಕೊಲೆ ರೇಪ್ ಮಾಡಿದವನಿಗೆ ಪೇಪರಿನಲ್ಲಿ ಮೊದಲ  ಪುಟ - ನೂರು ಜನರನ್ನು ರಕ್ಷಿಸಿದವನಿಗೆ ಯಾವುದೊ ಮೊಲೆಯಲ್ಲಿ ಸಣ್ಣ ಕೋಲಮ್ ಮಾತ್ರ ಯಾಕೆ 

ನೂರಾರು ಕಾನೂನು ಅವಶ್ಯಕತೆ ಇಲ್ಲ - ಕಾನೂನನ್ನು ನೂರಕ್ಕೆ ನೂರು ಅನುಷ್ಠಾನ ಮಾಡಿದರೆ ಮಾತ್ರ ಅದು ಪ್ರಜಾ ಪದ್ಧತಿ  - ತಪ್ಪಿದರೆ ನಾಟಕ ಮಾತ್ರ.

ಸನ್ಮಾರ್ಗಿಗಳ ಪರ ಮಾತ್ರ ನ್ಯಾಯವಾದಿಗಳು ವಕಾಲತ್ತು ಮಾಡುವ ಸುದಿನ - ನ್ಯಾಯದೇಗುಲದ ಪುನರ್ಪ್ರತಿಷ್ಠ ಕಾರ್ಯಕ್ರಮವಾಗಲಿದೆ 

ಪ್ರಪಂಚದ  ಪ್ರಜಾಪದ್ಧತಿ ದೇಶಗಳನ್ನು ನೋಡಿ - ಇಂದಿನ ಭಾರತದ ಅರಿವು ನಿಮಗಾಗಿ - ದುರ್ಮಾರ್ಗಿಗಳಿಗಿಂತ ಸಾನ್ಮಾರ್ಗಿಗಳು ಬಲಾಢ್ಯರು - ತಿಳಿದಿರಲಿ 

ಆಫ್ ಲೈನ್ ಜೀವನ ಮುಕ್ತಯವಾಗಿದೆ - ಆನ್ಲೈನ್ ಜೀವನ ಶುಭಾರಂಭವಾಗಿದೆ - ಈ ಅರಿವು ಜನಜಾಗ್ರತಿ - ಜಗದ ಜಾಗ್ರತಿ ಆಗಲಿದೆ    


No comments:

Post a Comment